ಬೆಂಗಳೂರಿನ ಹೆಬ್ಬಾಳ ಸೇರಿ 65 ವಾರ್ಡ್‌ಗಳಲ್ಲಿ ಅಂತರ್ಜಲ ಸಮಸ್ಯೆ ಬರಲಿದೆ! IISC ಅಧ್ಯಯನದಿಂದ ಹೊರಬಿತ್ತು ಸಂಗತಿ
ಬೇಸಗೆ ಆರಂಭದಲ್ಲಿಯೇ ಬೆಂಗಳೂರು ಜನರಿಗೆ ಐಐಎಸ್‌ಸಿ ಬೇಸರ ಸಂಗತಿಯೊಂದನ್ನು ಹೇಳಿದೆ. ನಗರದ 65 ವಾರ್ಡ್‌ಗಳಲ್ಲಿ ಅಂತರ್ಜಲ ಸಮಸ್ಯೆ ಬರಲಿದೆ ಎಂದು ಅಧ್ಯಯನ ವರದಿಯನ್ನು ನೀಡಿದೆ. ಈ ನೀರಿನ ಬವಣೆಯನ್ನು ಎದುರಿಸಲು ಬೆಂಗಳೂರು ಜಲಮಂಡಳಿಯು ಸಜ್ಜಾಗಿದೆ. ಯಾವೆಲ್ಲಾ ಬಡಾವಣೆಗಳಲ್ಲಿ ನೀರಿನ ಸಮಸ್ಯೆಯಾಗಲಿದೆ? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು: ಮುಂಬರುವ ದಿನಗಳಲ್ಲಿ ರಾಜಧಾನಿ ಬೆಂಗಳೂರಿನ 65 ವಾರ್ಡ್‌ಗಳಲ್ಲಿ ಅಂತರ್ಜಲದ ಸಮಸ್ಯೆ ಉಲ್ಬಣಿಸಲಿದೆ ಎಂಬ ಆತಂಕಕಾರಿ ಸಂಗತಿ ಹೊರಬಿದ್ದಿದೆ. ಇದರ ಬೆನ್ನಲ್ಲೇ ಬೆಂಗಳೂರು ಜಲಮಂಡಳಿ ಅಗತ್ಯ ಕ್ರಮಕ್ಕೆ ಮುಂದಾಗಿದೆ.
ಕಳೆದ ವರ್ಷದಂತೆ ಈ ಬಾರಿಯೂ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿಗಳು, ಕೇಂದ್ರ ಅಂತರ್ಜಲ ಸಂಸ್ಥೆ ಅಧಿಕಾರಿಗಳು ಮತ್ತು ರಾಜ್ಯ ಅಂತರ್ಜಲ ಮತ್ತು ಭೂವಿಜ್ಞಾನ ಇಲಾಖೆ ಬೆಂಗಳೂರು ನಗರದ ಅಂತರ್ಜಲ ಮಟ್ಟದ ವಸ್ತುಸ್ಥಿತಿ ಕುಧಿರಿತು ಅಧ್ಯಯನ ನಡೆಸಿ ವರದಿ ನೀಡಿದೆ. ಕೃತಕಬುದ್ದಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ, ಐಓಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಬಳಸಿ ಅಂತರ್ಜಲದ ಕುಸಿತ ಕುರಿತು ಐಐಎಸ್ಸಿ ವಿಶ್ಲೇಷಣೆ ಮಾಡಿದೆ. 65 ವಾರ್ಡ್‌ಗಳಲ್ಲಿಅಂತರ್ಜಲ ಕುಸಿದಿದ್ದು, ಮುಂಬರುವ ದಿನಗಳಲ್ಲಿ ಅಂತರ್ಜಲ ಸಮಸ್ಯೆ ಎದುರಾಗಲಿದೆ ಎಂಬುದನ್ನು ವರದಿಯಲ್ಲಿಉಲ್ಲೇಖಿಸಿದೆ
ಬೇಸಿಗೆಯಲ್ಲಿ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಈಗಾಗಲೇ ಬೆಂಗಳೂರು ಜಲಮಂಡಳಿ 10.14 ಕೋಟಿ ರೂ.ಗಳ ಕ್ರಿಯಾ ಯೋಜನೆ ರೂಪಿಸಿದ್ದು, ಇದರ ಜತೆಗೆ 65 ವಾರ್ಡ್‌ಗಳಲ್ಲಿನೀರಿನ ಸಂಪರ್ಕ ಮಂಜೂರಾತಿಗೆ ಪ್ರಾಮುಖ್ಯತೆ ನೀಡಲು ನಿರ್ಧರಿಸಿದೆ. ಈ ವಾರ್ಡ್‌ಗಳ ವ್ಯಾಪ್ತಿಯಲ್ಲಿನ ಕೊಳವೆ ಬಾವಿಗಳ ಮೇಲೆ ನಿಗಾ ಇಡಲು, ಆರ್.ಒ. ಪ್ಲಾಂಟ್‌ಗಳನ್ನು ಸರಿಯಾದ ರೀತಿಯಲ್ಲಿಕಾರ್ಯನಿರ್ವಹಣೆಯಾಗುವಂತೆ ಎಲ್ಲರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕೊಳವೆಬಾವಿ ವಿಭಾಗಕ್ಕೆ ಮಂಡಳಿ ನಿರ್ದೇಶನ ನೀಡಿದೆ
ಕೊಳವೆ ಮಾರ್ಗ ಸ್ಥಿತಿಗತಿಗಳ ಖಾತ್ರಿಗೆ ಸೂಚನೆ
ಈ ವಾರ್ಡ್‌ಗಳಲ್ಲಿನೀರು ಪೂರೈಕೆಯ ಕೊಳವೆ ಮಾರ್ಗ ಸರಿಯಾಗಿದೆಯೇ ಪರಿಶೀಲಿಸಿ, ಇಲ್ಲದಿದ್ದರೆ ಕೂಡಲೇ ಸರಿಪಡಿಸಲು, ನೀರಿನ ಸಂಪರ್ಕ ಪಡೆಯದಿರುವವರನ್ನು ಗುರುತಿಸಿ ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ತ್ವರಿತಗತಿಯಲ್ಲಿನೀರಿನ ಸಂಪರ್ಕ ಒದಗಿಸಲು ಹಾಗೂ ಈ ಪ್ರದೇಶಗಳಲ್ಲಿರುವ ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೊಳೆಗೇರಿ ಪ್ರದೇಶ, ಹೆಚ್ಚು ಜನಸಾಂದ್ರತೆ ವಾಸಿಸುವ ನೀರಿನ ಸಮಸ್ಯೆ ಇರುವ ಪ್ರದೇಶ ಹಾಗೂ ಅಪಾರ್ಟಮೆಂಟ್‌ಗಳಿಗೆ ಸಿಂಟೆಕ್ಸ್ ಟ್ಯಾಂಕ್, ತಾತ್ಕಾಲಿಕ ನೀರು ವಿತರಣೆ ಕೇಂದ್ರ ಹಾಗೂ ಕಾವೇರಿ ನೀರು ಸರಬರಾಜು ಕೇಂದ್ರ ಸ್ಥಾಪನೆಗೆ ಮುಂದಾಗಿದೆ.
ನೀರಿನ ಸಮರ್ಪಕ ವಿತರಣೆ, ಉಳಿತಾಯ
ಎಲ್ಲ ಪ್ರದೇಶಗಳಿಗೂ ನೀರು ಸಮರ್ಪಕ ರೀತಿಯಲ್ಲಿವಿತರಣೆಯಾಗವಂತೆ, ಕುಡಿಯುವುದು ಹಾಗೂ ಅಡುಗೆಗೆ ಆದ್ಯತೆಯಾಗಿ ವಿತರಣೆ ಮಾಡಲು ಕ್ರಮಕೈಗೊಳ್ಳಲು ನಿರ್ಧರಿಸಿರುವ ಮಂಡಳಿ, ಈ ಬಾರಿಯೂ ವಾಹನ ಶುದ್ಧೀಕರಣ, ತೋಟಗಾರಿಕೆ, ಮನೆ ಅಂಗಳ ಸ್ವಚ್ಛತೆ.. ಹೀಗೆ ಕುಡಿಯುವ ನೀರಿನ ಅನಗತ್ಯ ಬಳಕೆಗೆ ತಡೆ ಹಾಕುವುದಕ್ಕೆ ದಂಡ ವಿಧಿಸಲು ಸಜ್ಜಾಗಿದೆ.
ದೇವಾಲಯ, ಮಾಲ್, ಸರಕಾರಿ ಕಚೇರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿನ ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆಗೆ ಹೆಚ್ಚಿನ ಗಮನ ನೀಡಲು ಸಿಬ್ಬಂದಿಗೆ ನಿರ್ದೇಶನ ನೀಡಿದೆ. ನಗರದ ಕಟ್ಟಡ ಕಾಮಗಾರಿಗಳಿಗೆ ಕಡ್ಡಾಯವಾಗಿ ಸಂಸ್ಕರಿಸಿದ ನೀರು ಪೂರೈಕೆ ಮಾಡುವಂತೆ ನಿಗಾ ಇಡಲು ಅಧಿಕಾರಿಗಳಿಗೆ ಸೂಚಿಸಿದೆ.
ಮಾ.3ಕ್ಕೆ ಸಭೆ
65 ವಾರ್ಡ್‌ಗಳ ನೀರಿನ ನಿರ್ವಹಣೆ ಕುರಿತು ಚರ್ಚಿಸಲು ಮಂಡಳಿಯು ಮಾರ್ಚ್ 3ರಂದು ಸಭೆ ಆಯೋಜಿಸಿದೆ. ಈ ಪ್ರದೇಶಗಳ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ಗಳ ಸಂಖ್ಯೆ, ನೀರಿನ ಸಂಪರ್ಕ, ಕೆರೆ ನೀರು ತುಂಬಿಸುವುದು, 110 ಹಳ್ಳಿಗಳ ವ್ಯಾಪ್ತಿಯ ಸಂಪರ್ಕವಿಲ್ಲದ ಪ್ರದೇಶಗಳಿಗೆ ನೀರು ಸರಬರಾಜು, ಈ ಎಲ್ಲ ಕಾಮಗಾರಿಗಳಿಗೆ ತಗಲುವ ವೆಚ್ಚದ ಕುರಿತು ಚರ್ಚಿಸಲು ಸೂಕ್ತ ಮಾಹಿತಿಯೊಂದಿಗೆ ಸಭೆಗೆ ಆಧಿಗಧಿಮಿಸಿ ವರದಿ ನೀಡಬೇಕು ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾದ್ ಮನೋಹರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹಳೆಯ ವಾರ್ಡ್ ಸಂಖ್ಯೆಯೊಂದಿಗೆ ವಾರ್ಡ್ ಹೆಸರು
ಅಂತರ್ಜಲ ಸಮಸ್ಯೆ ಎದುರಾಗುವ ವಾರ್ಡ್‌ಗಳೆಂದರೆ, ಜಕ್ಕೂರು (ಹಳೆ ವಾರ್ಡ್ ನಂ.5), ದೊಡ್ಡಬೊಮ್ಮಸಂದ್ರ (10), ಶೆಟ್ಟಿಹಳ್ಳಿ (12), ಮಲ್ಲಸಂದ್ರ(13), ಟಿ.ದಾಸರಹಳ್ಳಿ (15), ಜಾಲಹಳ್ಳಿ (16), ಸಂಜಯನಗರ (19), ಹೆಬ್ಬಾಳ (21), ನಾಗವಾರ (23), ಹೊರಮಾವು (25), ರಾಮಮೂರ್ತಿ ನಗರ (26), ಕಮ್ಮನಹಳ್ಳಿ (28), ಕಾಡುಗೊಂಡನಹಳ್ಳಿ (30), ಕಾವಲ್ ಬೈರಸಂದ್ರ (32) ಮನೋರಾಯನಪಾಳ್ಯ (33), ದೊಡ್ಡಬಿದರಕಲ್ಲು(40), ಪೀಣ್ಯ ಕೈಗಾರಿಕಾ ಪ್ರದೇಶ (41), ನಂದಿನಿ ಲೇಔಟ್ (43), ಜೆ.ಸಿ.ನಗರ (46), ಲಿಂಗರಾಜಪುರ (49), ಕೆ.ಆರ್.ಪುರ (52), ಎ.ನಾರಾಯಣಪುರ (56), ಕಾಡು ಮಲ್ಲೇಶ್ವರ (65), ಮಹಾಲಕ್ಷ್ಮೀ ಪುರಂ (68), ಅಗ್ರಹಾರ ದಾಸರಹಳ್ಳಿ (105), ಅಗರಂ (114), ಬಿನ್ನಿಪೇಟೆ (121), ಕೆಂಪಾಪುರ ಅಗ್ರಹಾರ (122), ವಿಜಯನಗರ (123), ಹೊಸಹಳ್ಳಿ (124), ಮಾರುತಿ ಮಂದಿರ (126), ಮೂಡಲಪಾಳ್ಯ (127), ನಾಗರಬಾವಿ (128), ನಾಯಂಡಹಳ್ಳಿ (131), ಛಲವಾದಿಪಾಳ್ಯ (138), ಚಾಮರಾಜಪೇಟೆ (140), ಸಿದ್ದಾಪುರ (144), ಕೋರಮಂಗಲ (151), ಶ್ರೀನಗರ (156), ಗಾಳಿ ಆಂಜನೇಯ ದೇವಾಲಯ(157), ದೀಪಾಂಜಲಿ ನಗರ (158), ಕೆಂಗೇರಿ (159), ಹೊಸಕೆರೆಹಳ್ಳಿ (161), ಗಿರಿನಗರ(162), ಕತ್ರಿಗುಪ್ಪೆ(163), ಕರಿಸಂದ್ರ (166), ಪಟ್ಟಾಭಿರಾಮನಗರ (168), ಗುರುಪ್ಪನಪಾಳ್ಯ (171